ತಲೆನೋವೇ..? ಇಲ್ಲಿದೆ ಪ್ರಾಣ ಚಿಕಿತ್ಸೆಯಲ್ಲಿ ಪರಿಹಾರ
ತಲೆನೋವಿನಿಂದ ಆಗಾಗ ಬಳಲುತ್ತಿರುವಿರೇ..? ಅಸಾದ್ಯವಾದ ತಲೆನೋವಿನಿಂದ ಮಾನಸಿಕ ನೆಮ್ಮದಿ ಇಲ್ಲದಂತಾಗಿದೆಯೇ.? ಹಾಗಾದರೆ ಈ ಲೇಖನ ನಿಮಗಾಗಿ...
Dr Harsha B S
12/9/2023


ತಲೆನೋವು
ತಲೆನೋವು ಸಾಧಾರಣವಾಗಿ ಎಲ್ಲರಲ್ಲಿಯೂ ಕಂಡುಬರುವಂತಹ ಒಂದು ಸಾಮಾನ್ಯ ಸಮಸ್ಯೆ. ಆದರೆ ಇದು ಕೆಲವರಲ್ಲಿ ವಿಪರೀತವಾಗಿ, ಆಗಾಗ ಬಂದು ದಿನನಿತ್ಯದ ಕೆಲಸಗಳನ್ನು ಮಾಡುವುದೂ ಅಸಾಧ್ಯ ಎಂಬ ಹಂತಕ್ಕೆ ಬರುತ್ತದೆ. ಅಷ್ಥೇ ಅಲ್ಲದೇ ಇದು ಆಗಾಗ ಬರುವುದರಿಂದ ನಮ್ಮ ಆರೊಗ್ಯದ ಸಮತೋಲನ ತಪ್ಪುವುದಲ್ಲದೇ ನಮ್ಮ ಮಾನಸಿಕ ನೆಮ್ಮದಿಯನ್ನೂ ಹಾಳುಗೆಡವುತ್ತದೆ. ಇದೊಂದು ಸಣ್ಣ ಸಮಸ್ಯೆಯಾದರೂ ನಮ್ಮ ದಿನನಿತ್ಯದ ಕೆಲಸಗಳಮೇಲೆ ಇದರ ಪರಿಣಾಮ ಬಹಳ ಅಗಾಧ.
ತಲೆನೋವಿನ ವಿಧಗಳು:
೧. ಪ್ರಾಥಮಿಕ ತಲೆನೋವು:
ಪ್ರಾಥಮಿಕ ತಲೆನೋವು ಹೇಗೆ ಬರುತ್ತೆದೆ ಎಂದು ಅಷ್ಟು ನಿಖರವಾಗಿ ಹೇಳಲು ಸಾಧ್ಯವಾಗದಿದ್ದರೂ ಮುಖ್ಯವಾಗಿ ಸೆರಾಟೋಜೆನಿಕ್ ನ್ಯೂರೋಟ್ರಾನ್ಸ್ಮಿಷನ್ನಿನ ಅಡಚಣೆಯಿಂದ ಎಂದು ತಿಳಿಯಬಹುದು.
೨. ದ್ವಿತೀಯಕ ತಲೆನೋವು (Secondary ತಲೆನೋವು):
ದ್ವಿತೀಯಕ ತಲೆನೋವು ಸ್ವಯಂ ಖಾಯಿಲೆಯಾಗಿರದೆ ಇತರೆ ಖಾಯಿಲೆಗಳ ಗುಣಲಕ್ಷಣವಾಗಿದ್ದು ಅದು ಖಾಯಿಲೆಯಿಂದ ಖಾಯಿಲೆಗೆ ಬದಲಾಗುತ್ತದೆ.
ತಲೆನೋವಿಗೆ ಕಾರಣಗಳು:
ಪ್ರಾಥಮಿಕ ತಲೆನೋವು:
೧. ಮೈಗ್ರೇನ್
೨. ಒತ್ತಡದ ತಲೆನೋವು
೩. ಕ್ಲಸ್ಟರ್ ತಲೆನೋವು
೪. (ಹಾನಿಕರವಲ್ಲದ) ಪ್ಯಾರೊಕ್ಸಿಸ್ಮಲ್ ತಲೆನೋವು
ದ್ವಿತೀಯಕ ತಲೆನೋವು:
· ಇಂಟ್ರಾಕ್ರೇನಿಯಲ್ ಕಾರಣಗಳು,
ಹೆಮಟೋಮಾ
ಮೆದುಳಿನ ರಕ್ತಸ್ರಾವ
ಮೆದುಳಿನ ಬಾವು ಇತ್ಯಾದಿ
· ತಲೆಬುರುಡೆಯ ಹೊರಗಿನ ಕಾರಣಗಳು:
ಸೈನುಸೈಟಿಸ್
ಗ್ಲುಕೋಮಾ ಹಾಗೂ ಇತರ ಕಣ್ಣಿನ ಸಮಸ್ಯೆಗಳು
ಹಲ್ಲಿನ ಸಮಸ್ಯೆ
ಕೆಳಗಿನ ದವಡೆಯ ಕೀಲಿನ ಸಮಸ್ಯೆ
ಇತರೆ ಕಾರಣಗಳು:
ಜ್ವರ, ಔಷಧಗಳು, ರಕ್ತಹೀನತೆ, ರಕ್ತದೊತ್ತಡ, ಹಸಿವು, ಅಜೀಣ೯, ಇತ್ಯಾದಿ.
ಮೈಗ್ರೇನ್
ಮೈಗ್ರೇನ್ ತಲೆನೋವಿಗೆ ಸಾಮಾನ್ಯ ಕಾರಣವಾಗಿದೆ ಮತ್ತು ಇದು ಮಹಿಳೆಯರಲ್ಲಿ ಹೆಚ್ಛಾಗಿ ಕಂಡುಬರುತ್ತದೆ.
ಮೈಗ್ರೇನ್ ತಲೆನೋವಿನ ಮುಖ್ಯ ಲಕ್ಷಣವೆಂದರೆ ತಲೆಯ ಅಧ೯ ಭಾಗದಲ್ಲಿ ಕಾಣಿಸಿಕೊಳ್ಳುವ, ತೀವ್ರವಾದ ನೋವು; ಅದರೊಂದಿಗೆ ವಾಕರಿಕೆ, ವಾಂತಿ, ಮತ್ತು ಇನ್ನಿತರ ನರಸಂಬಂಧಿ ಸಮಸ್ಯೆಗಳು ಜೊತೆಯಲ್ಲಿ ಇರುತ್ತದೆ.
ಮೈಗ್ರೇನ್‌ನ ಮುಖ್ಯವಾದ ವಿಧಗಳು:
1. ಶಾಸ್ತ್ರೀಯ ಮೈಗ್ರೇನ್: ಆರ(aura)ದೊಂದಿಗೆ ಬರುವ ತಲೆನೋವು.
2. ಸಾಮಾನ್ಯ ಮೈಗ್ರೇನ್: ಆರ ಇಲ್ಲದೆಇರುವ ತಲೆನೋವು. ಇದು ಹೆಚ್ಚಾಗಿ ಕಂಡುಬರುತ್ತದೆ.
ಮೈಗ್ರೇನ್ನಲ್ಲಿ, ತಲೆನೋವು ಸಾಮಾನ್ಯವಾಗಿ ಅಸ್ವಸ್ಥತೆ ಮತ್ತು ಕಿರಿಕಿರಿಯಿಂದ ಪ್ರಾರಂಭಗೊಂಡು ನಂತರ ನರಸಂಬಂಧಿ ಆರದೊಂದಿಗೆ ಕೊನೆಗೊಳ್ಳುತ್ತದೆ . ಅತ್ಯಂತ ವ್ಯಾಪಕವಾಗಿ ಕಾಣಸಿಗುವ ಆರ ದೃಷ್ಟಿಗೆ ಸಂಬಂಧಿಸಿದ್ದಾಗಿದೆ, ಇದರೊಂದಿಗೆ ವಾಕರಿಕೆ, ವಾಂತಿ, ಫೋಟೊಫೋಬಿಯಾ (ಬೆಳಕು ನೋಡಲು ಆಗದಿರುವಿಕೆ) ಮತ್ತು ಫೋನೋಫೋಬಿಯಾದೊಂದಿಗಗಿನ( ಶಬ್ದ ಕೇಳಲು ಆಗದಿರುವಿಕೆ) ತೀವ್ರವಾದ ತಲೆನೋವು ಇರುತ್ತದೆ.
ಸೆಳವು ಅಥವಾ ಆರ ಕಾಣಿಸಿಕೊಂಡಾಗ ಕೆಲನಿಮಿ಼ಗಳ ಭಾಗಶಃ ಕುರುಡುತನ ಅಥವಾ ದೃಷ್ಟಿಮಬ್ಬಾದಂತೆ ಗ್ರಾಸವಾಗುತ್ತದೆ.. ಇದು ಸುಮಾರು 20-25 ನಿಮಿಷಗಳ ಕಾಲ ಇರುತ್ತದೆ. ಇದರೊಂದಿಗೆ ದೃಷ್ಟಿಕ್ಷೇತ್ರದಾದ್ಯಂತ ಬೆಳ್ಳಿಯ ಬಣ್ಣದ ಅಂಕುಡೊಂಕಾದ ರೇಖೆಗಳು ಗೊಚರಿಸುತ್ತವೆ.
ಮೈಗ್ರೇನ್ ಉಲ್ಬಣಗೊಳ್ಳುವಂತೆ ಮಾಡುವ ಅಂಶಗಳು:
ಋತುಬಂಧ, ರೆಡ್ ವೈನ್, ಹಸಿವು, ನಿದ್ದೆಯ ಕೊರತೆ/ಹೆಚ್ಚಳ, ಮದ್ಯ, ಭಾವನಾತ್ಮಕ ಒತ್ತಡ, ದೈಹಿಕ ಒತ್ತಡ, ಸುಗಂಧ ದ್ರವ್ಯಗಳು ಮತ್ತು ಗರ್ಭನಿರೋಧಕ ಮಾತ್ರೆಗಳು.
ತಡೆಗಟ್ಟುವಿಕೆ:
· ಆಲ್ಕೋಹಾಲ್, ಚಾಕೊಲೇಟ್ ಮುಂತಾದ ಪ್ರಚೋದಕ ಅಂಶಗಳಿಂದ ದೂರವಿರುವುದು
· ಸಾಕಷ್ಟು ನಿದ್ರೆಯನ್ನು ಖಾತ್ರಿಪಡಿಸಿಕೊಳ್ಳಬೇಕು ಮತ್ತು
· ಊಟವನ್ನು ತಪ್ಪಿಸಬಾರದು ಮತ್ತು ಸರಿಯಾದ ಸಮಯಕ್ಕೆಆಹಾರ ಸೇವಿಸಬೇಕು.
ಒತ್ತಡದ ತಲೆನೋವು:
ಜನಸಂಖ್ಯೆಯ ಬಹುಪಾಲು ಜನರು ಜೀವನದ ಒಂದಲ್ಲ ಒಂದು ಹಂತದಲ್ಲಿ ಅನುಭವಿಸುವ ಸಾಮಾನ್ಯ ರೀತಿಯ ತಲೆನೋವು ಇದು. ಈ ತಲೆ ನೋವು ಒಂದೇಸಮನೆ ಪೂತಿ೯ತಲೆ / ತಲೆಯ ಯಾವ ಭಾಗದಲ್ಲಾದರೂ ಕಂಡುಬಂದು, ವಾರಗಳು ಅಥವಾ ತಿಂಗಳುಗಳವರೆಗೆ ಮುಂದುವರಿಯಬಹುದು.
ಇದನ್ನು ಸಾಮಾನ್ಯವಾಗಿ ಮಂದ, ಬಿಗಿಯಾದ ಒತ್ತಡ ಅಥವಾ ಬ್ಯಾಂಡ್ ತರಹದ ಸಂವೇದನೆ ಎಂದು ವಿವರಿಸಬಹುದಾಗಿದೆ. ರೋಗಿಯು ಕಾರ್ಯನಿರತವಾಗಿದ್ದಾಗ ನೋವು ಕಡಿಮೆ ಗಮನಕ್ಕೆ ಬರುತ್ತದೆ ಮತ್ತು ದಿನದ ಕೊನೆಯಲ್ಲಿ ಬಹಳ ತೀವ್ರವಾಗಿರುತ್ತದೆ.
ಭಾವನಾತ್ಮಕ ಒತ್ತಡ, ಶಬ್ದ ಮತ್ತು ಆಯಾಸ ತಲೆನೋವಿಗೆ ಕಾರಣವಾಗಬಹುದು.
ಇದರಲ್ಲಿ ಮೈಗ್ರೇನ್ಗಿಂತ ಭಿನ್ನವಾಗಿ ನಮಗೆ ಫೋಟೊಫೋಬಿಯಾ, ವಾಕರಿಕೆ, ವಾಂತಿ ಅಥವಾ ಫೋಕಲ್ ನರಸಂಬಂಧಿ ಲಕ್ಷಣಗಳು ಇರುವುದಿಲ್ಲ.
ಈ ತಲೆನೋವು ನೋವು ನಿವಾರಕಗಳಿಂದ ಪೂತಿ೯ಯಾಗಿ ಕಡಿಮೆಯಾಗುವುದಿಲ್ಲ.
ಭಾವನಾತ್ಮಕ ಒತ್ತಡ, ಆತಂಕ ಅಥವಾ ಖಿನ್ನತೆಯ ಸರಿಯಾದ ನಿರ್ವಹಣೆಯನ್ನುಮಾಡಿದರೆ ಈ ತಲೆನೋವನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಮಸಾಜ್, ಬಿಸಿನೀರಿನ ಸ್ನಾನ ಮುಂತಾದ ವಿಶ್ರಾಂತಿಯ ತಂತ್ರಗಳು ಸಹ ಸಹಾಯಕವಾಗಿವೆ.
ಕ್ಲಸ್ಟರ್ ತಲೆನೋವು:
ಈ ನೋವು ನಿಯಮಿತವಾಗಿ ದಿನದ ನಿರ್ದಿಷ್ಟ ಸಮಯದಲ್ಲಿ ಹೆಚ್ಚಾಗಿ ಮುಂಜಾನೆ ಕಾಣಸಿಕೊಳ್ಳುತ್ತದೆ ಈ. ನೋವು ತೀವ್ರವಾಗಿರುತ್ತದೆ ಮತ್ತು 30-90 ನಿಮಿಷಗಳವರೆಗೆ ಇರುತ್ತದೆ. ಮೂಗು ಕಟ್ಟುವಿಕೆ ಕಣ್ಣೀರು ಬರುವಿಕೆ,, ಕಣ್ಣುಗಳ ಕೆಂಪು ಬಣ್ಣದೊಂದಿಗೆ, ಒಂದು ಕಣ್ಣಿನ ಸುತ್ತ ನೋವು ಇರುತ್ತದೆ. ಮತ್ತೊಂದು ಸುತ್ತಿನ ತಲೆನೋವು ಸಂಭವಿಸುವವರೆಗೆ ರೋಗಿಯು ವಾರಗಳು ಅಥವಾ ತಿಂಗಳುಗಳವರೆಗೆ ಲಕ್ಷಣರಹಿತವಾಗಿರಬಹುದು.
ಹೆಚ್ಚಿದ ಇಂಟ್ರಾಕ್ರೇನಿಯಲ್ ಒತ್ತಡದಿಂದಾಗಿ ತಲೆನೋವು:
ಇದು ಬೆಳಿಗ್ಗೆ ಎದ್ದ ನಂತರ ತೀವ್ರವಾಗಿರುತ್ತದೆ ಮತ್ತು ವ್ಯಕ್ತಿಯು ನೆಟ್ಟಗಾಗುತ್ತಿದ್ದಂತೆ ಸುಧಾರಿಸುತ್ತದೆ. ಇದಕ್ಕೆ ಸೂಕ್ತ ವೈದ್ಯಕೀಯ ಚಿಕಿತ್ಸೆ ತೆಗೆದುಕೊಳ್ಳಬೇಕಾಗುತ್ತದೆ.
ಪ್ರಾಣಿಕ್ ಹೀಲಿಂಗ್:
ಪ್ರಾಣಿಕ್ ಹೀಲಿಂಗ್ ನ ಸಹಾಯದೊಂದಿಗೆ, ವಿವಿಧ ರೀತಿಯ ತಲೆನೋವುಗಳನ್ನು ಬಹುಪಾಲು ಗುಣಪಡಿಸಬಹುದಾಗಿದೆ. ಪ್ರಾಣಿಕ್ ಹೀಲಿಂಗ್ ಚಿಕಿತ್ಸೆಯು ಪೂರಕ ಚಿಕಿತ್ಸೆಯಾಗಿದ್ದರೂ, ನಿಯಮಿತವಾಗಿ ತಲೆನೋವಿನಿಂದ ಬಳಲುತ್ತಿರುವವರಿಗೆ ಇದು ಉತ್ತಮ ಪರಿಹಾರವನ್ನು ನೀಡುತ್ತದೆ.
ಅದರ ಜೊತೆಗೆ ಪ್ರಾಣಿಕ್ ಹೀಲಿಂಗ್ ಸ್ಪಶಿ೯ಸದಯೇ, ಯಾವುದೇ ಔಷಧಗಳಿಲ್ಲದೆಯೇ ಮಾಡುವ ಚಿಕಿತ್ಸೆಯಾಗಿದ್ದು ಯಾವುದೇ ಅಡ್ಡ ಪರಿಣಾಮಗಳಿರುವುದಿಲ್ಲ.
ಪ್ರಾಣಿಕ್ ಹೀಲಿಂಗ್ ನ್ನು ಒಮ್ಮೆ ಕಲಿತ ನಂತರ ಯಾವಾಗ ಬೇಕಾದರೂ ಉಪಯೋಗಿಸಬಹುದು.
ತಮ್ಮನ್ನು ತಾವೇ ಗುಣಪಡಿಸಿಕೊಳ್ಳಬಹುದು ಅಥವಾ ಇತರರ ತಲೆ ನೋವು ಅಥವಾ ಇತರ ಸಮಸ್ಯೆಗಳನ್ನೂ ಗುಣಪಡಿಸಬಹುದಾಗಿದೆ.
ಹೆಚ್ಚಿನ ಸಂದರ್ಭಗಳಲ್ಲಿ ಸಂಪೂರ್ಣವಾದ ಪ್ರಾಣಿಕ್ ಹೀಲಿಂಗ್ ಚಿಕಿತ್ಸೆಯ ಜೊತೆಗೆ ತಲೆನೋವಿನ, ಮೂಲ ಕಾರಣವನ್ನು ತೆಗೆದುಹಾಕಿದರೆ ತಲೆನೋವನ್ನು ಸಂಪೂರ್ಣವಾಗಿ ಗುಣಪಡಿಸಬಹುದು.
ವಿಶೇಷವಾಗಿ ಜನರು ಒತ್ತಡದ ತಲೆನೋವಿನಿಂದ ಬಳಲುತ್ತಿರುವಾಗ ಅಥವಾ ಮಕ್ಕಳು ಪರೀಕ್ಷೆಯ ಒತ್ತಡದ ತಲೆನೋವಿನಿಂದ ಬಳಲುತ್ತಿರುವಾಗ ಪ್ರಾಣಿಕ್ ಹೀಲಿಂಗ್ನಿಂದ ಅವರನ್ನು ಸಂಪೂಣ೯ವಾಗಿ ಗುಣಪಡಿಸಲು ಸಾಧ್ಯವಿದೆ. ಇದರಲ್ಲಿ,ಅವರ ಭಾವನೆಗಳನ್ನು ತಿಳಿಗೊಳಿಸಲು ತರಬೇತಿ ನೀಡಲಾಗುವುದರಿಂದ ಒತ್ತಡ ಮತ್ತು ಚಿಂತೆಗಳನ್ನು ಚೆನ್ನಾಗಿ ನಿಭಾಯಿಸಲು ಸಾಧ್ಯವಾಗುತ್ತದೆ. ಇವಿಷ್ಟೇ ಅಲ್ಲದೇ ಕೆಲವು ಉಸಿರಾಟದ ವ್ಯಾಯಾಮಗಳನ್ನೂ ಹೇಳಿಕೊಡುವುದರಿಂದ ಮನಸ್ಸಿಗೆ, ಶಾಂತಿ ನೆಮ್ಮದಿಯೂ ದೊರಕುತ್ತದೆ.
ಲೇಖಕರು,
ಡಾI ಹಷ೯ ಬಿ. ಎಸ್ MDS
ದಂತ ವೈದ್ಯರು ಹಾಗೂ ಪ್ರಾಣಿಕ್ ಹೀಲಿಂಗ್ ತರಬೇತುದಾರರು
ಉಜಿರೆ.